ಕಾವ್ಯ ಭಾಗವತ : ಸೃಷ್ಟಿ ರಹಸ್ಯ – 2
9.ದ್ವಿತೀಯ ಸ್ಕಂದ
ಅಧ್ಯಾಯ-2
ಸೃಷ್ಟಿ ರಹಸ್ಯ – 2
ನಾರಾಯಣನುಪದೇಶಿಸಿದ
ವೇದಗಳೆಲ್ಲವನು
ಹೃದಯದಲಿ ಧರಿಸಿ
ಅವನಾಜ್ಞೆಯಂತೆ
ಅಖಂಡ ತಪವಂ ಗೈದು
ಸೃಷ್ಟಿಸಿದ
ಈ ಜಗವ ಬ್ರಹ್ಮದೇವ
ಈ ಜಗದೆಲ್ಲ
ಸೃಷ್ಟಿ ಸ್ಥಿತಿ ಸಂಹಾರ
ಗಳಿಗೆಲ್ಲ ಕತೃ
ಪ್ರಕೃತಿಪುರುಷ
ನಾರಾಯಣನಾದರೂ
ಜೀವಿಗಳಿಗಂಟುವ
ಶೋಕ ಮೋಹಗಳಾದಿಗಳಂಟಿಸಿ
ಕೊಳ್ಳದ
ಪೋಷಕ ನಾರಾಯಣ
ಮಣ್ಣಿನಿಂದ ಮಡಕೆಯಾಗಿ
ಸುಟ್ಟು ಪಾತ್ರೆಯಾಗಿ
ಎಲ್ಲರ ಹೊಟ್ಟೆ ತುಂಬಿಸಿ
ಒಡೆದು ಚೂರಾಗಿ
ಮತ್ತೆ ಮಣ್ಣಾಗುವಂತೆ
ವಿಕಾರ ಶೂನ್ಯ
ನಮ್ಮ ನಾರಾಯಣ
ಪೃಥ್ವಿ ತೇಜೋ ಜಲ ವಾಯು ಆಕಾಶ
ಗಳೆಂಬ ಪಂಚ ಭೂತಗಳ
ನೇತ್ರ ಶೋತೃ ಘ್ರಾಣ ರಸನ ತ್ವಗೀಂದ್ರಿಯ
ಗಳೆಂಬ ಪಂಚಜ್ಞಾನೇಂದ್ರಿಯಗಳ
ನೆರೆವಿನಿಂದನುಭವಿಸಿದೆಲ್ಲ
ರಸಗಳ
ನಿಯಂತ್ರಕ ನಾರಾಯಣ
ಜೀವಿಗಳ ಕರ್ಮಾನುಸಾರದಿ
ಕ್ರಿಮಿ ಕೀಟ, ಪಶು ಪಕ್ಷಿ
ಮಾನವರಾದಿಯಾಗಿ
ವಿವಿಧ ಜನ್ಮಗಳೆತ್ತಿ
ತನ್ನ ಸುಕರ್ಮ ಮಾತ್ರದಿಂ
ಪರಮಪದದಿ ಮುಕ್ತಿ
ಹೊಂದುವುದೇ
ಸೃಷ್ಟಿ ನಿಯಮವೆಂದು
ತನ್ನ
ಮತ್ಸ್ಯ, ಕೂರ್ಮ, ವರಾಹ, ನರಸಿಂಹ
ವಾಮನ, ರಾಮಾವತಾರದಿಂ
ಜಗಕೆಲ್ಲ
ತೋರಿದ
ಈ ಜಗದ ಸೃಷ್ಟಿ ನಿಯಾಮಕ
ನಾರಾಯಣ
ಈ ಕವನ ಸರಣಿಯ ಹಿಂದಿನ ಪುಟ ಇಲ್ಲಿದೆ :https://www.surahonne.com/?p=41015
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಭಾಗವತವನ್ನು ಕಾವ್ಯ ರೂಪದಲ್ಲಿ..
ಅನಾವರಣ…ಬಹಳ ಚೆನ್ನಾಗಿ ಪಡಿಮೂಡಿಸುತ್ತಿರುವ ನಿಮಗೆ ಧನ್ಯವಾದಗಳು ಸಾರ್
Nice
ಸೃಷ್ಟಿ ರಹಸ್ಯವನ್ನು ಸೂಕ್ಷ್ಮವಾಗಿ ಬಿಂಬಿಸಿದ ಸೊಗಸಾದ ಕಾವ್ಯ.