ಮಾತು ಮನವ ಅರಳಿಸಬೇಕು

ಮಾತು ಮತ್ತು ಮೌನ
ಮಾತು ಮನವ ಅರಳಿಸಬೇಕು
ಮೌನ ನಲಿವ ಉಳಿಸಬೇಕು
ಮಾತು ಒಲವಾಗಲಿ
ಎಲ್ಲರಿಗೂ ಒಳಿತಾಗಲಿ
ಮಾತು ಮೌನಗಳೆರಡು ಸೇರಿ
ಬದುಕನ್ನು ಸುಂದರಗೊಳಿಸಬೇಕು
ಹೊಸ ಬೆಳಕ ಚೆಲ್ಲಿ ಮನದ
ಕತ್ತಲೆಯ ಕಳೆಯಬೇಕು
ಬದುಕಿನ ಚೆಲುವ ಹೆಚ್ಚಿಸಬೇಕು
ಸುರಿವ ಕಣ್ಣೀರ ಸರಿಸಿ
ಪನ್ನೀರ ಹರಿಸಬೇಕು
ಚಿಂತೆಗಳ ಕಾರ್ಮೋಡ ಕರಗಿಸಿ
ನೆಮ್ಮದಿಯ ಚಿಲುಮೆಯ ಚಿಮ್ಮಿಸಬೇಕು
ಸಮುದ್ರದ ಅಲೆಗೂ ಜಗ್ಗದಂತ
ಉನ್ನತಿಯ ಸಾಧಿಸಬೇಕು
ಮಾತು ಮೌನದೊಳು ಬೆರೆತು
ಮೌನ ಒಲವ ಮಾತಾಗಬೇಕು
ಬದುಕಿನ ಪಥವ ಬದಲಿಸುವ
ಹೆಗ್ಗುರುತಿನ ಧ್ವನಿ ಯಾಗಬೇಕು
ಮಾತು ಮಾತಲ್ಲಿ ಜೀವ ಅರಳಲಿ
ದ್ವೇಷ ಅಸೂಯೆಗಳು ಅಳಿಯಲಿ
ಭವದೊಳಗಿನ ಬಾಂಧವ್ಯ ತೆರೆದುಕೊಳ್ಳಲಿ
ಮಾತು ಮೌನದ ಬೆಸುಗೆ ಹೊಸ ಉಸಿರಾಗಲಿ
ಜೀವ ತಂತಿಯ ಮೀಟುವ ಹಾಡಾಗಲಿ
–ನಾಗರಾಜ ಜಿ. ಎನ್. ಬಾಡ ಕುಮಟ
ಸೊಗಸಾಗಿದೆ
ಧನ್ಯವಾದಗಳು ಮೇಡಂ
ಜೀವಂತಿಯ ಮೀಟುವಂತಿದೆ !
ಅಭಿನಂದನೆ
ಚಂದದ ಕವನ ಸಾರ್..
Nice
ಸದಾಶಯ ಹೊಂದಿದ ಮಾತು ಹೇಗಿರಬೇಕು ಮತ್ತು ಅದರ ಮಹತ್ವವನ್ನು ತೊಳಿಸುವ ಸುಂದರ ಕವನ.
ಧನ್ಯವಾದಗಳು ಮೇಡಂ
ಧನ್ಯವಾದಗಳು
ಎಲ್ಲರಿಗೂ ಧನ್ಯವಾದಗಳು
ಸದಾಶಯವನ್ನು ಹೊಂದಿದ ಕವನ ಚೆನ್ನಾಗಿದೆ.