ಅಂಕದ ಪರದೆ

Share Button

ನೊಂದು ,
ಕಡುನೊಂದ
ಪಾಂಡವರ
ನಿಟ್ಟುಸಿರು
ತಟ್ಟುತ್ತಿದೆ,
ಭೀಕರ
ಶಾಪವಾಗಿ….

ಅಪ್ರತಿಮ
ಪತಿವ್ರತೆ
ಪಾಂಚಾಲಿಯ
ಮುಡಿ ಜ್ವಾಲೆ
ಚಾಚಿದೆ
ಬೆಂಕಿಯ,
ಕೆನ್ನಾಲಗೆಯಾಗಿ….

ಮಾಡಿದ
ಕರ್ಮಗಳು
ತೊಡೆ ತಟ್ಟಿದ
ದುರ್ಯೋಧನನ
ಕಾಡುತ್ತಿವೆ
ಬೆಂಬಿಡದ
ಭೂತವಾಗಿ….

ಕ್ಷಮಿಸಿದ್ದಾನೆ
ನೂರು ಬಾರಿ
ಶಿಶುಪಾಲನಂತೆ
ಮಾನವೀಯತೆ ಮರೆತ
ಈತನನು
ಆ ದೇವ ,
ಕರುಣಾಮಯಾಗಿ….

ಕೊನೆಗೂ
ಧಾರ್ತರಾಷ್ಟ್ರ
ಧರಾಶಾಹಿಯಾದಾಗ
ಬೀಳಲೇಬೇಕಲ್ಲ
ಅಂಕದ ಪರದೆ …
ಏಳುವುದೆಂತು ?
ಬಲ್ಲವರಾರು !
ಚೆಲುವೆ ಚೆನ್ನ.

ವೆಂಕಟಾಚಲ ಜಿ

8 Responses

  1. ನಯನ ಬಜಕೂಡ್ಲು says:

    ಚೆನ್ನಾಗಿದೆ

  2. ಬಿ.ಆರ್.ನಾಗರತ್ನ says:

    ಪಾಪದ ಕೊಡ ತುಂಬಿದ ಮೇಲೆ ಮುಳುಗಲೇಬೇಕಲ್ಲಾ.. ಬಹಳ ಅರ್ಥ ಪೂರ್ಣ ವಾದ ಸನ್ನಿವೇಶ ದ ಅನಾವರಣ ..ಆಧುನಿಕ ವಚನದಲ್ಲಿ ಅಥವಾ ಮುಕ್ತಕದಲ್ಲಿ ..ಹೊರಹೊಮ್ಮಿಸಿದ ರೀತಿ ಮನಕ್ಕೆ ಮುದತಂದಿತು ಸರ್.

    • ವೆಂಕಟಾಚಲ says:

      ಧನ್ಯವಾದಗಳು ಮೇಡಮ್…ಪ್ರೋತ್ಸಾಹದಾಯಕ ನುಡಿಗಳಿಗೆ…

  3. ಕವನ ಚೆನ್ನಾಗಿದೆ

  4. ಶಂಕರಿ ಶರ್ಮ says:

    ಸಣ್ಣದಾದರೂ, ಅರ್ಥಗರ್ಭಿತ ಸಾಲುಗಳಲ್ಲಿ ಅಡಗಿದ ಸಂದೇಶ ಅದ್ಭುತ!

  5. ಪದ್ಮಾ ಆನಂದ್ says:

    ಅರ್ಥಪೂರ್ಣವಾದ ಮನಮುಟ್ಟುವ ಸುಂದರ ಕವನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: