ಹೀಗೊಂದು ಸಾಲು…… by Nagaraja B. Naik · January 16, 2025 ದಿಕ್ಕು ದಿಶೆಯಲೂನೂರು ಬಿಂಬಗಳುಪ್ರತಿಬಿಂಬದ ನೆರಳುಅಂದುಕೊಳ್ಳದಯಾರೂ ಮರೆಯದಹೀಗೊಂದು ಸಾಲುಬದುಕ ಹಣತೆಗೆಬೆಳಕಾಗಿ ಕಾಣುವಮಾತು ಮಾತಿಗೆಹಾಡಾಗಿ ಉಳಿವಕಾವ ಕಲ್ಪನೆಯಕೂಸಾಗಿ ಇರುವಹೀಗೊಂದು ಸಾಲುಇಳೆಯ ನೆರಳಲ್ಲಿತಂಪು ಚೆಲ್ಲಿದ ನೆನಪುಪ್ರತಿ ಕವಿತೆಯೂಒಲವಿನ ರೂಪಕಪದವೇ ಸಗ್ಗವಾಗಿಉಳಿವ ಕೌತುಕವೇಹೀಗೊಂದು ಸಾಲು……… -ನಾಗರಾಜ ಬಿ. ನಾಯ್ಕ, ಕುಮಟಾ +3
So meaningful words.
ಧನ್ಯವಾದಗಳು ತಮ್ಮ ಓದಿಗೆ….
ಸರಳವಾಗಿ ಕಂಡರೂ ಅರ್ಥಪೂರ್ಣ ವಾದ ಕವನ..ಸಾರ್
ಧನ್ಯವಾದಗಳು…..
ಚೆನ್ನಾಗಿದೆ
ಹೀಗೊಂದು ಸಾಲಿನ ಉಪಯುಕ್ತತೆಯನ್ನು ಸಾರುವ ಕವನ.
ಧನ್ಯವಾದಗಳು…..
ಪ್ರತಿ ಕವಿತೆ ಸಹ ಒಲವಿನ ರೂಪಕ ಎಂದ ನಿಮ್ಮ ಹೀಗೊಂದು ಸಾಲು ನನ್ನ ಕಲಕಿತು.
ನಾನಿಂದು ಎಂಎ ಮಕ್ಕಳಿಗೆ ಪಾಠ ಮಾಡುವಾಗ ಪ್ರಾಯೋಗಿಕ ವಿಮರ್ಶೆಗೆ ಕೊಟ್ಟಿದ್ದೆ.
ಕವಿತೆಯಲಷ್ಟೇ ಇಂಥ ಪ್ರಯೋಗಗಳನ್ನು ಮಾಡಬಹುದು. ಧನ್ಯವಾದ ಸರ್.
ಸರ್ ತಮ್ಮ ಓದಿಗೆ ಹಾಗೂ ಮಾತಿಗೆ ಧನ್ಯವಾದಗಳು…… ಕವಿತೆ ಎಂದರೆ ಅದು ಆಪ್ತತೆ……. ಅನುಬಂಧದ ಪ್ರತಿರೂಪ…. ತಮ್ಮ ಮಾತಿಗೆ ನಾನು ಧನ್ಯ ಸರ್……
ಅರ್ಥಪೂರ್ಣ ಸಾಲುಗಳ ಸೊಗಸಾದ ಕವಿತೆ.