ಅಮ್ಮನ ನೆನಪುಗಳು

ನೀನು ಇರದ ಮೇಲೆ
ನಿನ್ನ ನೆನಪುಗಳೇ ನನ್ನುಸಿರು
ನೀನು ಇರದ ಜಾಗ
ಕಲಶವಿರದ ಆ ದೇಗುಲವು
ನಿನ್ನ ಮೌನ
ಭತ್ತಿದ ಆ ಸಾಗರವು
ನಿನ್ನ ನಗುವು
ಅದುವೇ ನನ್ನ ಹಸಿವು
ಒಂದು ಬಾರಿ ನನ್ನ ಸ್ವರವ ಕೇಳು
ಅದುವೇ ನನ್ನ ಎದೆಯ ಏದುಸಿರು
ನೀನು ಹೊರಡುವ ಮುನ್ನ
ಒಮ್ಮೆ ನನ್ನ ಕ್ಷಮಿಸಿಬಿಡು ಓ ಅಮ್ಮ
ಈ ಕವನವೇ ನನ್ನ ಮನಸ್ಸಿನ ಕಾಣಿಕೆ ಅಮ್ಮ
ಮುಂದಿನ ಜನ್ಮ ಇದ್ದರೆ ಸಾಕು ಅಮ್ಮ
ನಿನ್ನ ಮಗುವಾಗಿ ಮಡಿಲಲಿ ಮಲಗಿರುವೆನಮ್ಮ
ನಿನ್ನ ಭೇಟಿಗೆ ಭರತನಂತೆ ಕಾದಿರುವೆನು ಅಮ್ಮ
ನಿನ್ನ ದಾರಿಗೆ ನಾನೆಂದೂ ಕಾವಲುಗಾರನು ಅಮ್ಮ.
–ನಿಶಾಂತ್ ರಾವ್, ಮಂಗಳೂರು
ಭಾವಪೂರ್ಣ ಕವಿತೆ.
ಅಮ್ಮನ ಕವನಗಳೇ ಚೆಂದ. ಸರಳ ಸುಂದರ ಕವನ.
ತಾಯಿಯ ಸ್ಮರಣೆಯೇ ಸದಾ ಚೇತನ..
ಅಮ್ಮ ಎಂಬ ಹೆಸರೇ ತುಂಬಾ ಭಾವನಾತ್ಮಕ. ದೇವರು ಕೊಟ್ಟ ದೊಡ್ಡ ಉಡುಗೊರೆ. ಅಮ್ಮನ ನೆನಪು ಕವನ ತುಂಬಾ ಚೆನ್ನಾಗಿ ಮೂಡಿ ಬಂದಿದೆ
ಸುಂದರ ಕವಿತೆ
ಅಮ್ಮನ ಬಗ್ಗೆ ಎಷ್ಟು ಹೇಳಿದರೂ, ಬರೆದರೂ ಕಡಿಮೆಯೇ….!
ಸುಂದರ ಭಾವಪೂರ್ಣ ಕವನ.