ಕಾಡುವ ಕವಿತೆ

Share Button

ಮನವ ಕಾಡುವುದ ಅರಿತೆ
ಮನದೊಳಗೆ ಅಡಗಿ ಕುಳಿತೆ
ಸಮಯದ ಪರಿವೆಯ ಮರೆತೆ
ಒಳಗೊಳಗೆ ದಿನವೂ ಅವಿತೆ

ತುಂಬುವುದು ಹೊಸ ಬಯಕೆ
ಮನದಿ ಭಾವನೆಗಳ ಹೊದಿಕೆ
ಸಿಹಿ ಸಿಹಿ ನೆನಪುಹಳ ಕಾಣಿಕೆ
ಸಾಗಿದೆ ನಿತ್ಯವೂ ಹೊಸ ಕಲಿಕೆ

ತಂಗಾಳಿ ಸೋಕಿ ಹೋದಂತೆ
ಮನದಿ ಬೆಳದಿಂಗಳು ಚೆಲ್ಲಿದಂತೆ
ಭಾವನೆಗಳ ಗುಚ್ಛ ಅರಳಿದಂತೆ
ಆಗಸದಿ ಮೂಡಿದ ಚಂದ್ರಿಕೆಯಂತೆ

ಬದುಕಿನೊಳಗೆ ಏನೋ ಹರುಷ
ಸಂಭ್ರಮವು ಪುಟಿದೇಳುತ್ತಿದೆ
ಸಾಗರದಿ ಮೂಡುವ ಅಲೆಯಂತೆ
ಪುಳಕವ ನೀಡುತ್ತಿದೆ ಪ್ರತಿ ನಿಮಿಷ

ಕವಿತೆಯು ಹುಟ್ಟುವ ಈ ಸಮಯವು
ಮನದೊಳಗೆ ಅಪರಿಮಿತ ಹರುಷವು
ಏನೋ ಹೊಸ ಸಂಚಲನ ಒಳಗೊಳಗೆ
ಬಿಡುಗಡೆಯ ಭಾವ ಈ ಭಾವನೆಗಳಿಗೆ

ನಾಗರಾಜ ಜಿ. ಎನ್. ಬಾಡ
ಕುಮಟ, ಉತ್ತರ ಕನ್ನಡ.

7 Responses

  1. MANJURAJ H N says:

    ಕವಿತೆ ಹುಟ್ಟಿದ ಸಮಯ
    ಬಹುಶಃ ಛಂದಸ್ಸೂ ಆಗಲೇ ಹುಟ್ಟಿಬಿಟ್ಟಿರಬೇಕು.

    ತಾಳ, ಲಯಬದ್ಧ ಪದ್ಯಪಾದ. ಅರ್ಥಪೂರ್ಣ ಆವರಣ
    ಓದುವಾಗ ಸರಳ ಎನಿಸಿದರೂ ಬರೆಯುವುದು ಸರಳವಲ್ಲ.

    ಹಾಗೆನ್ನುವವರು ಒಮ್ಮೆ ಬರೆದು ನೋಡಲಿ, ತಿಳಿಯವುದು.
    ಅಭಿನಂದನೆ ಮತ್ತು ಧನ್ಯವಾದ ಸರ್‌, ನಿಮ್ಮ ಕವಿತೆಗಳ ಛಂದೋಲಯವೇ
    ವಿಸ್ಮಯಕಾರಿ ಜೊತೆಗೆ ಆಹ್ಲಾದಕಾರಿ.

  2. ಸೊಗಸಾದ ಕವಿತೆ ಸಾರ್

  3. ನಯನ ಬಜಕೂಡ್ಲು says:

    ಸೊಗಸಾಗಿದೆ

  4. ವಿನಯಾ ಎನ್. says:

    ನವನವೀನ ಭಾವನೆ, ಹೊಸಹೊಸ ಕಲಿಕೆ, ನಿತ್ಯನೂತನವೆನಿಸುವ ಕವಿತೆಗಳು ಹೀಗೆಯೇ ಹುಟ್ಟಿ ಮನಕೆ ಮುದ ನೀಡುತಿರಲಿ…ಚೆನ್ನಾಗಿದೆ.

  5. ಶಂಕರಿ ಶರ್ಮ says:

    ಕವಿತೆ ಹುಟ್ಟುವ ಸಮಯದ ಭಾವಪೂರ್ಣ ಅನಾವರಣವಾಗಿರುವ ಕವನ ಚೆನ್ನಾಗಿದೆ.

  6. ಸಾಗರದ ಅಲೆಗಳಂತೆ ಹೊಮ್ಮುವ ಕವಿತೆಯ ಹುಟ್ಟು ಚೆನ್ನಾಗಿ ಮೂಡಿಬಂದಿದೆ

  7. ಪದ್ಮಾ ಆನಂದ್ says:

    ಕವಿತೆ ಹುಟ್ಟುವ ಸಮಯದಲ್ಲಿ ಮನದಲ್ಲುಂಟಾಗುವ ಭಾವನೆಗಳನ್ನು ಚಂದದಿಂದ ಸೆರೆಹಿಡಿದಿಡಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: