ಮೆಟ್ಟಿಲಿನ ಮಾತು……

ನಗುವಿನ ನಗುವಿಗೂ
ಒಂದು ಗುರುತಂತೆ
ಒಲವಿನ ಒಲವಿಗೂ
ನೆನಪಿನ ಪುಟ ಇದೆಯಂತೆ
ಹೂವಿನ ಚೆಲುವಿಗೂ
ಬೇರಿನ ಹರಿವಂತೆ
ಸಾಗಿದ ಪಯಣಕೂ
ನಲಿವಿನ ಪಥ
ಎಳೆ ಎಳೆಯಲೂ
ಬದುಕಿಸುವ ಬಂಧ
ಉಸಿರಿನ ಹೆಸರಿಗೆ
ರಾಗದ ಹಾಡಂತೆ
ಸಾಗುವ ದಾರಿಯ
ದೂರದ ನಡುವೆ
ಮೆಟ್ಟಿಲ ಮಾತು ಹಲವು
ಬದುಕಿಗೆ ಆಸರೆ
ಏರಿದ ಹೆಜ್ಜೆಗೆ
ಮಾತಿಗೆ ಒಲವಿಗೆ
ಕುಳಿತ ಮನಸು
ಉಪಕರಿಸಿದ ಬೆವರು
ಭರವಸೆಯಂತೆ
ಬಾಳಿ ಬದುಕಿದ
ಮನುಜನಂತೆ ಮೆಟ್ಟಿಲು
ನೆಲೆಯ ನಡೆಯಂತೆ
ನಮ್ಮರಿವಿನ ಉಳಿವಂತೆ
–ನಾಗರಾಜ ಬಿ. ನಾಯ್ಕ ,ಕುಮಟಾ.
ಮೆಟ್ಟಿಲಿನ ಮಾತು ಕವನ..ಚಿಂತನೆ ಗೆ ಹಚ್ಚುವಂತಿದೆ
ಧನ್ಯವಾದಗಳು
ಚಂದದ ಕವನ
ಧನ್ಯವಾದಗಳು
ಸುಂದರವಾಗಿದೆ
ಧನ್ಯವಾದಗಳು
ಮೆಟ್ಟಿಲು ಮಾತನಾಡಿದಂತಿದೆ ಕವನ. ಚಂದ ಸರ್
ಧನ್ಯವಾದಗಳು
ಮೆಟ್ಟಲಿನ ಮನದ ಮಾತು ಮನಮುಟ್ಟುವಂತಿದೆ…ಕವನ ಭಾವಪೂರ್ಣ!