‘ಆನ ಪನ ಮರಂ’…ಈಂದಿನ ಹುಡಿ

Share Button
Chandravathy

ಚಂದ್ರಾವತಿ, ಬೆಂಗಳೂರು

 

ಮಂಗಳೂರಿನ ಪುಟ್ಟ ಅಂಗಡಿಯೊಂದರ ಮುಂದೆ ‘ಇಲ್ಲಿ ಈಂದಿನ ಹುಡಿ’ ಸಿಗುತ್ತದೆ ಎಂಬ ಬೋರ್ಡ್ ಗಮನಿಸಿದೆ. ಮನಸ್ಸು ಸುಮಾರು 50 ವರ್ಷ ಹಿಂದಕ್ಕೆ ಹೋಯಿತು. ಸುಮಾರಾಗಿ ತಾಳೆಮರ, ಈಚಲು ಮರಗಳನ್ನು ಹೋಲುವ ಈಂದಿನ ಮರವು ಉದ್ದವಾಗಿ ಬೆಳೆಯುತ್ತದೆ. ಕೇರಳದ ಕಾಡುಗಳಲ್ಲಿ ಧಾರಾಳವಾಗಿ ಕಾಣಸಿಗುತ್ತದೆ.ಈಗಿನ ಹಲವರಿಗೆ ಈಂದಿನ ಮರದ ಉಪಯೋಗಗಳ ಬಗ್ಗೆ ಗೊತ್ತಿರಲಾರದು. ಕೇರಳದ ಹಳ್ಳಿಯಲ್ಲಿ ಬಾಲ್ಯ ಕಳೆದಿದ್ದ ನನಗೆ ‘ಈಂದಿನ ಮರ’ ಚಿರಪರಿಚಿತ. ಈ ಮರದ ಎಲೆಗಳನ್ನು ಆನೆಗಳು ಇಷ್ಟಪಟ್ಟು ತಿನ್ನುವುದರಿಂದ ಇದಕ್ಕೆ ಕೇರಳದಲ್ಲಿ  “ಆನ ಪನ ಮರಂ” ಎಂದು ಹೆಸರು.

Pana

ಆಧುನಿಕ ಪಂಪ್, ಪೈಪ್ ಅನುಕೂಲತೆಗಳಿಲ್ಲದ ಆ ಕಾಲದಲ್ಲಿ ಗದ್ದೆಗಳಿಗೆ ನೀರು ಹಾಯಿಸಲು ಏತ ನೀರಾವರಿ ಪದ್ಧತಿ ಇತ್ತು. ಈಂದಿನ ಮರದ ದೊಡ್ಡ ಬೋಗುಣಿಯನ್ನು ಬಕೆಟ್ ನಂತೆ ದೊಡ್ಡ ಕೋಲಿಗೆ ಕಟ್ಟಿ ಅದನ್ನು ತೆರೆದ ಬಾವಿಗೆ ಇಳಿಸುತ್ತಿದ್ದರು. ಕೋಲಿನ ಇನ್ನೊಂದು ತುದಿಯನ್ನು ಮನುಷ್ಯರು ಜಗ್ಗಿದಾಗ ಬೋಗುಣಿಯಲ್ಲಿ ನೀರು ಮೇಲೆ ಬರುತ್ತಿತ್ತು. ಆ ನೀರನ್ನು ಪುಟ್ಟ ಕಾಲುವೆಗಳ ಮೂಲಕ ಗದ್ದೆಗೆ ಹಾಯಿಸುತ್ತಿದ್ದರು.

ಈಂದಿನ ಮರದ ಕಾಂಡದ ಹೊರ ಭಾಗ ಬಹಳ ಗಟ್ಟಿ. ಒಳಭಾಗ ಟೊಳ್ಳಾಗಿ ಸ್ಪಂಜಿನಂತೆ ಇರುತ್ತದೆ. ಮರವನ್ನು ಅಡ್ಡಲಾಗಿ ಕತ್ತರಿಸಿದಾಗ ಸಿಲಿಂಡರ್ ನ ಹಾಗೆ ಕಾಣಿಸುವ ಕಾಂಡದಿಂದ ತಿರುಳನ್ನು ಬೇರ್ಪಡಿಸುತ್ತಾರೆ. ಈ ಕಾಂಡಭಾಗದಿಂದ ಉಪ್ಪು, ಪಶು ಆಹಾರ ಇತ್ಯಾದಿಗಳನ್ನು ಸಂಗ್ರಹಿಸಿಡಲು ಉಪಯೋಗವಾಗುವ್ಹ ಮರದ ಬಾಕ್ಸ್ ಗಳನ್ನು ತಯಾರಿಸುತ್ತಿದ್ದರು.

Indina hudi dishes

 

ತಿರುಳನ್ನು ನೀರು ಸೇರಿಸಿ ರುಬ್ಬಿ, ಸೋಸಿದಾಗ ಸಿಗುವ ಬಿಳಿ ಪಿಷ್ಟವನ್ನು ಒಣಗಿಸಿದರೆ ‘ಈಂದಿನ ಹುಡಿ’ ಸಿಗುತ್ತದೆ. ಇದು ದೇಹಕ್ಕೆ ಬಹಳ ತಂಪು. ಈ ಪುಡಿಯನ್ನು ಮೊದಲು ಸ್ವಲ್ಪ ನೀರಿನಲ್ಲಿ ಕದಡಿಸಿ, ಆಮೇಲೆ ಸಣ್ಣ ಉರಿಯಲ್ಲಿ ಬೇಯಿಸಿ ರುಚಿಕರವಾದ ಗಂಜಿ ಮಾಡಿಕೊಳ್ಳಬಹುದು. ಸಿಹಿ ಇಷ್ಟಪಡುವವರು ಹಾಲು-ಸಕ್ಕರೆ ಸೇರಿಸಿ ಕುಡಿಯಬಹುದು. ಅಥವಾ ಉಪ್ಪು, ತರಕಾರಿ,ಮಸಾಲೆ ಸೇರಿಸಿ ಸೂಪ್ ತಯಾರಿಸಿ ಕುಡಿಯಬಹುದು. ಸ್ವಲ್ಪದಪ್ಪವಾಗಿ ಹಿಟ್ಟು ಕಲಸಿ, ಬೆಲ್ಲ. ತುಪ್ಪ ಹಾಕಿ ಬೇಯಿಸಿ ‘ಹಾಲುಬಾಯಿ’ ಸಿಹಿತಿಂಡಿ ಯನ್ನೂ ಮಾಡಬಹುದು.

Jaggery palm- anapanaಈಂದಿನ ಪುಡಿ ನುಣ್ಣಗೆ ಆರಾರೂಟ್ ಪುಡಿಯಂತೆ ಇರುತ್ತದೆ. ಇದಕ್ಕೆ ತನ್ನದೇ ಆದ ವಿಶಿಷ್ಟವಾದ ಪರಿಮಳ, ರುಚಿ ಇಲ್ಲದಿರುವುದರಿಂದ ಇದನ್ನು ಆರಾರೂಟ್ ಅಥವಾ ಕೋರ್ನ್ ಪುಡಿಗಳನ್ನು ಬಳಸುವ ಅಡುಗೆಗಳಲ್ಲಿ, ಪಿಷ್ಟವಾಗಿ ಬಳಸಬಹುದು.

ತಾಳೆ ಮರ, ತೆಂಗಿನ ಮರ, ಈಚಲು ಮರಗಳ ಹೊಂಬಾಳೆಯನ್ನು ಗಾಯಗೊಳಿಸಿ, ಅದಕ್ಕೆ ಮಡಕೆ ಕಟ್ಟಿ ‘ನೀರಾ’ ಇಳಿಸುವಂತೆ, ಈಂದಿನ ಮರದಿಂದಲೂ ‘ನೀರಾ’ ಇಳಿಸುತ್ತಾರೆ. ಈ ನೀರಾದಿಂದ ಬೆಲ್ಲವನ್ನೂ ತಯಾರಿಸುತ್ತಾರೆ. ಇದಕ್ಕೆ ಕೇರಳದಲ್ಲಿ ‘ಕಳಿಬೆಲ್ಲ’ ಎಂದು ಹೆಸರು.

ಈಂದಿನ ಮರದಲ್ಲಿ ಉದ್ದವಾದ ಬಿಳಲುಗಳಂತಹ ಹೂವು ಮತ್ತು ಅದರಲ್ಲಿ ಕಾಯಿಳಾಗುತ್ತವೆ. ಈ ಮರದ ಹಣ್ಣುಗಳನ್ನು ಕಾಡುಪ್ರಾಣಿಗಳು ತಿನ್ನುತ್ತವೆ. ಬಿಳಲುಗಳು ಬಹಳ ಗಟ್ಟಿಯಾಗಿರುವುದರಿಂದ ಹಗ್ಗ ತಯಾರಿಗೆ ಬಳಸುತ್ತಾರೆ.  ಹೀಗೆ ಈಂದಿನ ಮರದ ಎಲ್ಲಾ ಭಾಗಗಳು ಉಪಯುಕ್ತ.

 

– ಚಂದ್ರಾವತಿ, ಬೆಂಗಳೂರು

14 Responses

 1. Ganesh Bhat says:

  ಕೃತಜ್ಞತೆಗಳು.

 2. jayashree b kadri says:

  ಉಪಯುಕ್ತ ಮಾಹಿತಿ. ‘ಹಾಲು ಬಾಯಿ ಅಂತೂ ಸೂಪರ್. ತುಂಬಾ ತಂಪು ಎಂದೂ ಹೇಳುತ್ತಾರೆ.

 3. savithribhat says:

  ನಮ್ಮಲ್ಲಿ ಈ೦ದಿನ ಮರಗಳುತು೦ಬಾ ಇವೆ .ಆದರೆ ಅದರ ಉಪಯೋಗ ಬಹಳ ಕಡಿಮೆ .ಮಾಹಿತಿಗೆ ಧನ್ಯವಾದಗಳು

 4. Dinesh Naik says:

  NICE

 5. Pushpalatha Mudalamane says:

  ಇದನ್ನು ಕನ್ನಡ ದಲ್ಲಿ ಬಗನಿ ಮರ ,ಬೈನೆ ಮರ ,ಕನ್ನಿಡ ಕೊಂಡ ,ಈಂದಿನ ಮರ ಎನ್ನು ತ್ತಾರೆ !
  ಕೊಂಕಣಿಯಲ್ಲಿ : ಇಂದಾ ರೂಕು ,ಬೈ ನಿ ರೂಕ್ ,
  ತುಳು :ಈಂದ್ ,ಕಣ್ಣಿದ ಮರ ಎಂಬ ಹೆಸರು
  Botanical Name : Caryota urens : Fish Tail Palm

 6. Chandravathi says:

  ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

 7. krisnaveni kidoor says:

  ವಿವರ ತಿಳಿದು ಮರವನ್ನೇ ಪುನ ನೋಡಿದ ಹಾಗಾಯ್ತು .ನಮ್ಮ ಸುತ್ತಮುತ್ತಲೇ ಕಾಣಸಿಗುವ ಹೀಗಿರುವ ಅಪರೂಪದ ಮೌಲ್ಯಯುಕ್ತತೆ ಹೊಂದಿದವುಗಳು ಸಾಕಷ್ಟಿರುತ್ತದೆ .ನಮಗೆ ತಿಳಿದಿರುವುದೇ ಇಲ್ಲ.ಒಳ್ಳೆಯ ಮಾಹಿತಿಗಳು. ಇದೇ ಮರ ಕಡಿದಲ್ಲಿ ಗೊನೆ ಬಿಟ್ಟು ಹೋಗಿದ್ದರು ನಮ್ಮ ಮನೆಯ ತೋಟದಲ್ಲಿ .ಅದರ ಗೊನೆಯ ಕಾಯಿಯ ಚಂದಕ್ಕೆ ಸೋತು ಗೊನೆಯ ಮೇಲೆ ಹತ್ತಿ ಹಾರಿದ್ದೆವು ,ಮನೆಗೆಲಸದ ಗುಲಾಬಿ ಬೆತ್ತ ಹಿಡಿದು ಬಂದು ಮನೆಗೆ ಓಡಿಸಿದ್ದು ಹಸಿರಾಗಿದೆ .ಅದರ ರಸ ತಾಗಿದರೆ ವಿಪರೀತ ತುರಿಕೆ ಎಂದು ಮೈತುಂಬ ನವೆ ಎದ್ದಾಗಲೇ ಗೊತ್ತಾದ್ದು .ಆಗ ಅರ್ಥವಾಗಿತ್ತು ಓಡಿಸಿದ್ದು ಯಾಕೆ ಅಂತ . ಆದರೂ ಗೊನೆಯ ಹಸಿರು ಕಾಯಿಗಳು ತುಂಬಾ ಚಂದ .ನನಗೆ ತುಂಬಾ ಹಿಡಿಸಿದ ಬರಹ.

 8. RAGHAVENDRA S NAYAK . says:

  Thanks

 9. ವಿಜಯಾಸುಬ್ರಹ್ಮಣ್ಯ,ಕುಂಬಳೆ. says:

  ಈ ಲೇಖನದಿಂದ ನಾನೂ ಬಾಲ್ಯದ ದಿನಗಳನ್ನು ನೆನಪಿಸುವಂತಾಯಿತು.ಇನ್ನೊಂದು ಇದೇ ಜಾತಿಯ ಮರ ಇದೆ. ಅದಕ್ಕೆ ’ಪನೆಮರ’ ಎಂದು ಹೆಸರು. ಇದರಿಂದಲೂ ಹುಡಿ ತಯಾರಿಸಿ ದೋಸೆ, ಮಣ್ಣಿ, ವಗೈರೆ ಆಹಾರ ತಯಾರಿಸುತ್ತಾರೆ. ಚಂದ್ರಾವತಿ ಅತ್ತಿಗೆಗೆ ಧನ್ಯವಾದಗಳು.

 10. Krishna Pramod says:

  ನಿಜಕ್ಕೂ ಉತ್ತಮ ಮಾಹಿತಿ,,

 11. Marlon says:

  I spent a lot of time to find something like this

 12. Anonymous says:

  ನನಗೆ ಈ ಹುಡಿ ಜೀವನಾಡಿ. ಸ್ವಲ್ಪ ಉಷ್ಣ ಆದರೂ ನನಗೆ ಇದೇ ಮದ್ದು.

 13. Vihwanatha says:

  ನಮ್ಮಲ್ಲಿ ಈಂದಿನ ಪುಡಿ ತಂದು ಫ್ರಿಜ್ಜಲ್ಲಿಟ್ಟು ಎರಡು ವರ್ಷಗಳೇ ಆದವು. ಈಗ ಸೂಪ್ ಮಾಡುವ ಐಡಿಯಾ ಸಿಕ್ಕಿತು.!! ನೋಡ್ಬೇಕು ಏನಾಗ್ತದೇಂಂತ!!?

 14. Dr.Ashoka CH says:

  nice to read madam. informtive

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: