ಬಂಧಮುಕ್ತಗೊಳಿಸು ಗೆಳತಿ
‘
ಕಳೆದು ಹೋಗಿದೆ ಹೃದಯದ ಕೀಲಿಕೈ
ಹುಡುಕಿ ಕೊಡುವೆಯಾ ಗೆಳತಿ
ಏಮಾರಿಸಿ ಮೈಮರೆಸಿದೆ ನೀನು
ನನ್ನದೇ ಹೃದಯದೊಳಗೆ ಬಂಧಿಯಾದೆ ನಾನು
ಕಾರಣವಿಲ್ಲದೇ ನಿನ್ನ ಹಿಂಬಾಲಿಸಿದೆ
ಬಂಧಮುಕ್ತನಾಗಲು ನಾ ಪರಿತಪಿಸಿದೆ
ಹೃದಯ ಕವಾಟಗಳು ಕಂಪಿಸಿದವು
ನಿನ್ನ ಪ್ರೀತಿಯೇ ಮುಕ್ತಿಯ ಮಾರ್ಗ ಎಂದವು
ಒಂದೇ ಪ್ರೀತಿ ಹತ್ತುಹಲವು ರೀತಿ
ಆದರೆ ನಾನಿನ್ನೂ ಹೃದಯದೊಳಗೇ ಬಂಧಿ
ಒಮ್ಮೆ ಬಂದು ನನ್ನ ರಕ್ಷಿಸು ಪ್ರಿಯೆ
ಮೋಹದ ಕೀಲಿಕೈಯಿಂದ ಹೃದಯವ ತೆರೆ
ಕಾರಾಗೃಹವಾಗಿ ದುರ್ಬಲವಾಗಿದೆ ಎದೆ
ಏನಾದರಾಗಲಿ ಒಮ್ಮೆ ಬಂದುಬಿಡು
ತೆರೆದುಬಿಡು ಹೃದಯದ ಬಾಗಿಲು
ಬಂಧಮುಕ್ತಿಗೊಳಿಸಿ ನನ್ನ ಪ್ರೀತಿಸು
ನಾಡಿಮಿಡಿತದೊಂದಿಗೆ ನೀ ಕಾದಾಡು
ಬಿಡಿಸುವ ಯತ್ನದಲಿ ನೀನೇ ಬಂಧಿಯಾಗು
ನನ್ನ ಉಸಿರಿಗೆ ನೀ ನಿಟ್ಟುಸಿರಾಗು
ಹೃದಯದ ಜೈಲಿನಲಿ ನೀನೂ ಖೈದಿಯಾಗು
.
– ಲಕ್ಷ್ಮೀಶ ಜೆ.ಹೆಗಡೆ
.