ಕಂದನಿಗೆ ಕಾಗದ
ತುತ್ತು ಬಾಯೊಳು ಇಡುವ ಹೊತ್ತು ಬಂದಾಗೆಲ್ಲ
ಚಿತ್ತ ನಿನ್ನನೆ ನೆನೆದು ಸುತ್ತು ಉರುಳುವುದು
ಹತ್ತಿರದ ಊರಿನಲಿ ಮುತ್ತು ನೀನಿಲ್ಲೆಂದು
ಗೊತ್ತು ಇದ್ದರು ಕೂಡ ಮತ್ತೆ ಬಳಲುವುದು.
ಹತ್ತು ಸಾವಿರ ಮಂದಿ ಸುತ್ತಲಿದ್ದರು ಕೂಡ
ಎತ್ತಿ ಹುಡುಕುತ ನಿನ್ನ ಕತ್ತು ನೋಯುವುದು
ಹೊತ್ತಿದಂತೇ ದೀಪ ಮುತ್ತಿಕೊಳ್ವುದು ನೆನಪು
ಚಿತ್ತಾರ ಬಂಗಾರ ಮತ್ತೆಂದು ಬರುವೆ?
– ಮೋಹಿನಿ ದಾಮ್ಲೆ (ಭಾವನಾ)
‘ಕಂದಮ್ಮಗಳು ಕೆಲಸ ಬೊಗಸೆ ಎಂದು ದೇಶ ವಿದೇಶಕ್ಕೆ ಹಾರುವ ಕಾಲದಲ್ಲಿ ಹೆತ್ತಮ್ಮಗಳ ತೊಳಲಾಟವನ್ನು ಬರಿ ಮಾತಿನಲಿ ಹಿಡಿದಿಡಲಾದೀತೆ?’ ಎನ್ನುವವರು ಹೌದೆಂದು ತಲೆದೂಗುವಂತೆ ಮೂಡಿಬಂದಿವೆ ಸಾಲುಗಳು 🙂
ಧನ್ಯವಾದಗಳು ನಾಗೇಶ ಮೈಸೂರು,
ತಾಯಿ ಮತ್ತು ಕಂದನ ಸಂಭಂಧವೇ ಅಂತದ್ದು
ಅಪರೂಪ ಅವರ್ಣನೀಯ
ನಿಮ್ಮ ಕವಿತೆಯೂ ಅಂತೆಯೇ