ಸಾಕಲ್ಲವೆ ವಟಗುಟ್ಟಿದ್ದು…..
ಕುಂತಲ್ಲೇ ಜೀವ ಬಿಟ್ಟರು ಅಂದರೆ ಹೀಗೆನಾ,
ಸತ್ತಿರೊದು ನೋಡಿದರೆ ಪ್ರಾಣ ಬಾಯಿಂದಾನೆ
ಹೋಗಿರ ಬಹುದಾ, ಅಥವಾ ಮೊನ್ನೆ ಹೊಡೆದ
ಸಿಡಿಲಿಗಾ,
ಬದುಕಿದ್ದಾಗ ಕುಂತಲೇ ನಾಲಿಗೆ ಹೊರಗೆ ಚಾಚಿ
ಜೀವಾನ ಬಡೆದು ಬಾಯಿಗೆ ಹಾಕೊತ್ತಾ ಇತ್ತು.
ಇಲ್ಲವ ಹಾರಿ ನುಂಗಾಕ್ ತಿತ್ತು.
‘ಈಗ’ ನೋಡಿ ಬಿಟ್ಟ ಬಾಯಿಯೊಳಗೆ ಇರುವೆ
ನುಗ್ಗಿ ಬರತದೆ ಮುಚ್ಚಂಗಿಲ್ಲ…..
‘ಇದು ಏನನ್ನು ತಿಂದು ಬದುಕುತಿತ್ತೊ
ಅವೆಲ್ಲಾ ಇದನ್ನು ತಿಂದು ಬದುಕುತ್ತಿವೆ’.
ಆದರೆ ನಾವು…ನಮ್ಮನ್ನು….
ಸಾಕಲ್ಲವೆ ವಟಗುಟ್ಟಿದ್ದು…..
– ಶೈಲಜೇಶ್ ರಾಜ, ಮೈಸೂರು
ಗೋವಿಂದಾ ಗೋವಿಂದ
ಇಷ್ಟವಾಯ್ತು ನಿಮ್ಮ ವಟಗುಟ್ಟಿದ್ದು
” ಇದು ಏನನ್ನು ತಿಂದು ಬದುಕುತ್ತಿತ್ತೋ ”
”ಅವೆಲ್ಲ ಇದನ್ನು ತಿಂದು ಬದುಕುತ್ತಿವೆ ”
ಆದರೆ ನಾವು … ನಮ್ಮನ್ನು ….
ಬಲು ಅರ್ಥವತ್ತಾದ ಸಾಲುಗಳಿವು . ಚೆನ್ನಾಗಿದೆ ಇನ್ನೂ ನಿರೀಕ್ಷಿಸಬಹುದಾ?