ವಿಶ್ವ ಯೋಗದಿನ.. ಜೂನ್ 21, 2015
ಜೂನ್ 21, 2015, ವಿಶ್ವ ಯೋಗದಿನ, ವಿಶ್ವದಲ್ಲಿಯೇ ಸಂಚಲನ ಮೂಡಿದ ದಿನ. ಏಕಕಾಲದಲ್ಲಿ 177 ರಾಷ್ಟ್ರಗಳಲ್ಲಿ ಯೋಗಾಭ್ಯಾಸದ ಮಹತ್ವವು ಪ್ರತಿಫಲನಗೊಂದ ದಿನ. ದೆಹಲಿಯ ರಾಜಪಥದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಂಡ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ 35,785 ಮಂದಿ ಭಾಗವಹಿಸಿದ್ದು ಮತ್ತು 84 ರಾಷ್ಟ್ರಗಳ ನಾಗರಿಕರು ಪಾಲ್ಗೊಂಡಿದ್ದು – ಇವೆರಡೂ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾದ ದಿನ.
ಮೈಸೂರಿನಲ್ಲಿ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯ ಆವರಣದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಇತ್ತೀಚ್ಗೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮೂಲಕ ಯೋಗ ತರಬೇತಿ ಪಡೆಯುತ್ತಿದ್ದ ನಮಗೆ ಇದು ಸುರ್ವಣಾವಕಾಶ. ತರಗತಿಯಲ್ಲಿ ನಮಗೆ ಸಾಮೂಹಿಕ ಯೋಗ ಕಾರ್ಯಕ್ರಮ್ದಲ್ಲಿ ಪ್ರದರ್ಶಿತವಾಗಲಿರುವ ಆಸಗಳ ಬಗ್ಗೆ ಪೂರ್ವಭಾವಿ ತರಬೇತಿ ನೀಡಿದ್ದರು. ಪ್ರಥಮ ಬಾರಿಗೆ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಉತ್ಸಾಹ, ಕಾತರದಿಂದ ಜೂನ್ 21 ರಂದು ಬೆಳಗಾಗುವುದನ್ನು ಕಾಯುತ್ತಿದ್ದೆವು.
ಜೂನ್ 21 ರಂದು ಮುಂಜಾವಿನಿಂದಲೇ ಧಾರಾಕಾರವಾಗಿ ಸುರಿಯುತ್ತಿದ್ದಮಳೆ ಯಾರ ಉತ್ಸಾಹವನ್ನು ಕುಗ್ಗಿಸಿರಲಿಲ್ಲ. ” ಸ್ವಲ್ಪ ಸಮಯ ಮಳೆ ನಿಲ್ಸಪ್ಪಾ…” ” Rain , Rain Go away…” “ಅಬ್ಬಾ ಮಳೆಯೇ, ನಿಂದರೆ ಸಾಕಿತ್ತು..” ” ಒನ್ನು ಈ ಮಳ ನಿನ್ನಿರುನ್ನೆಂಕಿಲ್ “ ಹೀಗೆ ನಮಗೆ ಗೊತ್ತಿರುವ ಎಲ್ಲಾ ಭಾಷೆಗಳಲ್ಲಿಯೂ ವರುಣದೇವನಿಗೆ ಬಗೆಬಗೆಯಾಗಿ ವಿನಂತಿ ಮಾಡುತ್ತಾ , ಬೆಳಗ್ಗೆ 0630 ಗಂಟೆಗೆ ಅರಮನೆಯ ಆವರಣವನ್ನು ಸೇರಿದ್ದೆವು.
ಆಗಲೇ ಸುಮಾರು 4000 ಕ್ಕೂ ಹೆಚ್ಚು ಜನ ಜಮಾಯಿಸಿದ್ದರು. ಅಲ್ಲಿ ಮಂಜು ಮುಸುಕಿದ ವಾತಾವರಣವಿತ್ತು. ಅನತಿ ದೂರದಲ್ಲಿರುವ ಕಂಗೊಳಿಸುವ ಚಾಮುಂಡಿ ಬೆಟ್ಟದಲ್ಲಿ ಮೋಡಗಳ ಕಣ್ಣು ಮುಚ್ಚಾಲೆ ನಡೆದೇ ಇತ್ತು. ಇವೆಲ್ಲದರ ನಡುವೆಯೂ ನಿಗದಿತ ಸಮಯದಲ್ಲಿ, ಕಾರ್ಯಕ್ರಮ ಆರಂಭವಾಗಿತ್ತು. ನೀರಲ್ಲಿ ಒದ್ದೆಯಾಗಿದ್ದ ಮ್ಯಾಟ್ ಅನ್ನು ಹಿಂಡಿ ಪುನ: ಬಿಡಿಸಿ ಕುಳಿತೆವು.
ಪ್ರಥಮ ಅಂತಾರಾಷ್ಟ್ರೀಯ ಯೋಗ ದಿನ ಮೈಸೂರಿನಲ್ಲಿ ವರುಣ ದೇವನ ಆಶೀರ್ವಾದದೊಂದಿಗೆ ಆರಂಭಗೊಂಡು ಸಂಪನ್ನಗೊಂಡಿದ್ದು ಸರಿ! ನೆರೆದ ಆರೂ ಸಾವಿರ ಮಂದಿ ಕದಲದೆ ನಿಂತಾಗ ಮಳೆರಾಯನೇ ಇನಿತು ಹೆದರಿದನೋ ಎಂಬಂತೆ ಯೋಗಾಭ್ಯಾಸ ಆರಂಭಗೊಂಡಲ್ಲಿಂದ ಕಡೆಯವರೆಗೆ ಮತ್ತೆ ಮಳೆಯ ಸುಳಿವಿರಲಿಲ್ಲ. ನೆರೆದ ಆಬಾಲ ವೃದ್ಧಾದಿಗಳು ಪೂರ್ವಾಧಿಕ ಉತ್ಸಾಹದಿಂದ ಪ್ರಥಮ ಯೋಗ ದಿನವನ್ನು ನೆನಪಿನ ಬುತ್ತಿಯೊಳಗಿನ ಚೆಂದದ ನೆನಪನ್ನಾಗಿಸಿ, ಭಾರತೀಯತೆಯ ಹೆಮ್ಮೆಯಲ್ಲಿ ಪಾಲ್ಗೊಳ್ಳುವ ಅತ್ಯುತ್ಸಾಹದಿಂದ ಪ್ರಪಂಚಕ್ಕೇ ನಮ್ಮ ಐಕ್ಯತೆಯ ಸೂಚನೆಯನ್ನಾಗಿಯೂ ಪರಿವರ್ತಿಸಿದ್ದರು.
ಸಾಮೂಹಿಕ ಮಂತ್ರೋಚ್ಛಾರಣೆಯಿಂದ ಆರಂಭವಾಗಿ, ನಿರಿತ ಯೋಗಪಟುಗಳ ಅದೇಶಕ್ಕೆ ಅನುಗುಣವಾಗಿ ಕೆಲವು ಯೋಗಾಸನ ಪ್ರಾಣಾಯಾಮದ ಪ್ರಕಾರಗಳನ್ನು ಸಾಮೂಹಿಕವಾಗಿ ಅಭ್ಯಾಸ ಮಾಡಿದೆವು. ತಾಡಾಸನ, ವೃಕ್ಷಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ಬದ್ಧಕೋನಾಸನ, ವಕ್ರಾಸನ, ಶಶಾಂಕಾಸನ, ಭುಜಂಗಾಸನ ಶಲಭಾಸನ, ಮಕರಾಸನಸೇತುಬಂಧಾಸನ, ಪವನ ಮುಕ್ತಾಸನ, ಉಜ್ಜಾಯಿ ಪ್ರಾಣಾಯಾಮ, ಭ್ರಾಮರೀ ಪ್ರಾಣಯಾಮ ಮತ್ತು ಯೋಗಾಭ್ಯಾಸ-ಯೋಗಜೀವನದ ಬಗ್ಗೆ ವಚನಸ್ವೀಕಾರದೊಂದಿಗೆ ಸುಮಾರು ಒಂದು ಗಂಟೆ ಅವಧಿಯ ಕಾರ್ಯಕ್ರಮ ಸಂಪನ್ನಗೊಂಡಿತು.
ಸಾವಿರಾರು ಜನ ಸೇರಿದ್ದ ಇಂತಹ ಸಾಮೂಹಿಕ ಕಾರ್ಯಕ್ರಮದಲ್ಲಿ. ಪ್ರಥಮ ಬಾರಿಗೆ, ಯಶಸ್ವಿಯಾಗಿ ಪಾಲ್ಗೊಂಡ ತೃಪ್ತಿಯಿಂದ ಮನೆಗೆ ಮರಳಿದೆವು.
– ಹೇಮಮಾಲಾ.ಬಿ
It was really a wonderful experience. smile emoticon Jala-Yoga
ವರುಣದೇವನಿಗೆ ನಿಮ್ಮೆಲ್ಲರೊಡನೆ ಯೋಗ ಮಾಡುವ ಆಸೆ ಆಗಿತ್ತಂತೆ…. ಆಸೆ ತೀರಿಸಿಕೊಂಡು ತೃಪ್ತನಾದ ಅಂತ ಸುದ್ದಿ ಬಂದಿದೆ !