ಬ್ರಾಹ್ಮಣೇತರರು.. ಜಾತಿಪದ್ಧತಿ
ಸಾಮಾನ್ಯವಾಗಿ ಜಾತಿ ವಿಚಾರವನ್ನು ಪ್ರಸ್ತಾಪಿಸುವಾಗ ಮೇಲ್ವರ್ಗದವರೆಂದು ಪರಿಗಣಿಸಲಾಗಿರುವ ಬ್ರಾಹ್ಮಣರು ಇತರರನ್ನು ಶೋಷಿಸುತ್ತಾರೆಂದು ಘಂಟಾಘೋಷವಾಗಿ ಹೇಳಲಾಗುತ್ತದೆ. ಯಾವುದೋ ಕಾಲದಲ್ಲಿ ಹಾಗೆ ಆಗಿದ್ದಿರಬಹುದು. ಆದರೆ ಈಗಿನ ವಿದ್ಯಾವಂತ ಬ್ರಾಹ್ಮಣ ಸಮಾಜ ಇದನ್ನು ಆಚರಿಸುವುದೂ ಇಲ್ಲ, ಸಮರ್ಥಿಸುವುದೂ ಇಲ್ಲ. ಎಷ್ಟೋ ತಲೆಮಾರುಗಳ ಹಿಂದೆ ಘಟಿಸಿದೆ ಎನ್ನಲಾದ ಅನ್ಯಾಯಗಳಿಗೆ ಈಗಿನ ಜನಾಂಗವನ್ನೂ ಅಷ್ಟೇ ಹೊಣೆಗಾರರು ಎಂಬಂತೆ ಬಿಂಬಿಸುವುದು ಎಷ್ಟು ಸರಿ? ಕೆಲವು ಅಪವಾದಗಳಿರಬಹುದು. ಆದರೆ ಎಲ್ಲಾ ಬ್ರಾಹ್ಮಣರನ್ನೂ ಕಾಮಾಲೆ ದೃಷ್ಟಿಯಿಂದಲೇ ನೋಡುವುದು, ತೋಳ-ಕುರಿಮರಿಯ ಕಥೆಯಂತಾಗಿದೆ.
ಬ್ರಾಹ್ಮಣೇತರರು ಜಾತಿಪದ್ಧತಿಯನ್ನು ತಮ್ಮದೇ ಶೈಲಿಯಲ್ಲಿ ಆಚರಿಸುತ್ತಾರೆ ಎಂಬುದು ಕಟುಸತ್ಯ. ಒಂದು ಉದಾಹರಣೆ ಇಲ್ಲಿದೆ, ಓದಿ:
ಸುಮಾರು 45 ವರ್ಷದವಳಾಗಿರಬಹುದಾದ ನಮ್ಮ ಮನೆಗೆಲಸಕ್ಕೆ ಬರುವ ಸಹಾಯಕಿ ನಂಬಿಗಸ್ಥೆ. ಕಳೆದ ಹದಿನೈದು ವರ್ಷಗಳಿಂದಲೂ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ನಮಗೂ ಅವಳಿಗೂ ಪರಸ್ಪರ ಹೊಂದಾಣಿಕೆ ಚೆನ್ನಾಗಿದೆ, ಸಕಾರಣವಿಲ್ಲದೆ ರಜೆ ಮಾಡುವುದಿಲ್ಲ. ಸಾಮಾನ್ಯವಾಗಿ ಅನಾವಶ್ಯಕ ಮಾತು/ಹರಟೆ/ಚಾಡಿ ಇಲ್ಲ. ಅವಳು ಬೇರೆ ಹಲವು ಮನೆಗಳಿಗೆ ಹೋಗುತ್ತಾಳಾದರೂ, ಇಷ್ಟು ದೀರ್ಘಾವಧಿ ಎಲ್ಲೂ ಕೆಲಸ ಮಾಡಿಲ್ಲ. ಒಂದೆರಡು ವರ್ಷ ಕೆಲಸ ಮಾಡಿ ಏನೋ ಕಾರಣಕ್ಕೆ “ಅಲ್ಲಿ ಕೆಲ್ಸ ವಸಿನಾ….. ನಂಕೈಲಾಗಲ್ಲ…… ಸರಿ ಹೋಯ್ತಾ ಇಲ್ಲ” ಹೀಗೆಲ್ಲಾ ಹೇಳುತ್ತಾ ಆ ಮನೆಗಳಿಗೆ ನಮಸ್ಕಾರ ಹೇಳಿ ಇನ್ನೊಂದು ಮನೆ ಹುಡುಕುತ್ತಾಳೆ. ಇದು ಪುನರಾವರ್ತಿತವಾಗುತ್ತಿರುತ್ತದೆ.
ಇನ್ನು ತಡೆಯಲಾರದೆ ನಾನು ” ನಿನ್ನ ದೇವರು ಪ್ರತ್ಯಕ್ಷವಾಗಿ ಹಾಗಂದನೆ ? ಹಾಗಾದರೆ ನನಗೂ ಆ ದೇವರನ್ನು ನೋಡಬೇಕು. ಅವನನ್ನು interview ಮಾಡಿ, ಸಮಾಜದ ಕೆಲವು ಸಮಸ್ಯೆಗಳನ್ನು ಭಿನ್ನವಿಸಿ, ನಿನ್ನಿಂದ ಮೊದಲುಗೊಂಡು ಈ ಪ್ರಪಂಚದ ಹಲವಾರು brain ಗಳನ್ನು repair ಮಾಡಯ್ಯಾ ಎಂದು ಬೇಡಿಕೊಳ್ಳಬೇಕು. ಹಾಗಾದರೆ ನೀನು ನಮ್ಮ ಮನೆಯ ಕೆಲಸವನ್ನು ಆರಂಭಿಸುವ ಮೊದಲೂ ನಮ್ಮ ಜಾತಿಯ ಬಗ್ಗೆ ಬೇರೆಯವರಲ್ಲಿ ಮುಂಚಿತವಾಗಿ ವಿಚಾರಿಸಿ ಬಂದದ್ದಾಗಿರಬೇಕಲ್ಲವೇ, ಆದರೆ ನೀನು ಯಾವ ಜಾತಿ ಎಂದು ನಮಗೆ ಇದುವರೆಗೆ ಗೊತ್ತಿಲ್ಲ, ಇನ್ನೂ ಬೇಕಾಗಿಲ್ಲ, ಮನೆಗೆಲಸ ಮಾಡಿದರೆ ಸಾಕು ಅಷ್ಟೆ” ಅಂದೆ.
ಪೆಚ್ಚಾಗಿ ಹ್ಹಿ..ಹ್ಹಿ ..ಹ್ಹಿ ಎಂದು ನಕ್ಕಳು.
– ಹೇಮಮಾಲಾ.ಬಿ
,
ಬ್ರಾಹ್ಮಣರನ್ನು ಟೀಕಿಸೊದು ಒಂಥರ fashion ಆಗಿದೆ ..ವಿಷಯ ಗೊತ್ತಿರಲಿ, ಗೊತ್ತಿಲ್ಲದಿರಲಿ ..ಟೀಕೆ ಮಾತ್ರ ಮಾಡ್ತಾರೆ ..
ಸಮಾಜದ ಇತರೆ ಸಮುದಾಯಗಳನ್ನು ಮುಂದೆ ತರಲು ಅನಾದಿಕಾಲದಿಂದಲೂ ಬ್ರಾಹ್ಮಣ ಜನಾಂಗ ಶ್ರಮಿಸಿದೆ ಶ್ರಮಿಸುತ್ತಿದೆ.
ಆದರೆ ಬ್ರಾಹ್ಮಣರ ಒಳ್ಳೆಯ ಕೆಲಸವನ್ನು ಬೇಕಂತಲೇ ಮುಚ್ಚಿಡುತ್ತಾರೆ.
ಬ್ರಾಹ್ಮಣರನ್ನು ಅನಾವಶ್ಯಕವಾಗಿ ಟೀಕಿಸಿದರೆ ತಪ್ಪು. ಬ್ರಾಹ್ಮಣ್ಯ ಎಲ್ಲಾ ಜಾತಿ ಧರ್ಮಗಳಲ್ಲಿ ಇರುವಂಥದ್ದು. ಅದನ್ನು ಸರಿಯಗಲಿ ಎಂದು ಟೀಕಿಸಬೇಕೇ ಹೊರತು, ನಂಜಿರಬಾರದು.
ಲೇಖನ ಮಧ್ಯದಲ್ಲಿ ಏನೋ ಮುಢ್ರಣವಾಗಿಲ್ಲ ಅನ್ಸುತ್ತೆ!
ಮುದ್ರಣ ಸರಿಯಾಗಿಯೇ ಇದೆ. ಲೇಖನದ ಮಧ್ಯದಲ್ಲಿ ಒಂದು ಚಿತ್ರವಿದೆ. ಅಂತರ್ಜಾಲ ಸಂಪರ್ಕ ನಿಧಾನವಿದ್ದಾಗ, ಚಿತ್ರ ಪರದೆ ಮೇಲೆ ಕಾಣಿಸಿಕೊಳ್ಳದಿರುವ ಸಾಧ್ಯತೆ ಇದೆ.