ಪಾಪದ ಬಾಗಿಲು!
ಅವಳು ಗೊಣಗಿದಳು
ಇವನು ರೇಗಿದ
ಅವಳು ಅರಚಿದಳು
ಇವನು ಕಿರುಚಿದ
ಅವಳು ನೀನು ಅಹಂಕಾರಿಯೆಂದಳು
ಇವನು ನೀನು ದುರಂಹಂಕಾರಿಯೆಂದ
ಅವಳು ಕೈಲಿದ್ದ ತಟ್ಟೆ ಎಸೆದೆಳು
ಇವನು ಲೇಸು ಕಟ್ಟುತ್ತಿದ್ದ ಬೂಟುಗಳ ಎಸೆದ
ಅವಳು ಹಾಸಿಗೆ ದಿಂಬುಗಳ ಹರಿದು ಅರಳೆ ಹರಡಿದಳು
ಇವನು ಅವಳ ಡ್ರೆಸ್ಸಿಂಗ್ ಟೇಬಲ್ಲಿನ ಪ್ರಸಾಧನಗಳ ಅವಳತ್ತ ಎಸೆದ
ಅವಳು ದಡಾರನೆ ಬಾಗಿಲು ತೆರೆದು ಹೊರಗೆ ಹೊರಟುಹೋದಳು
ಇವನು ದಡಾರನೆ ಬಾಗಿಲು ಮುಚ್ಚಿ ಸೋಫಾದಲ್ಲಿ ಕುಕ್ಕರಿಸಿದ
ಪಾಪ
ಏನೂ ತಪ್ಪು ಮಾಡದ
ಬಡಪಾಯಿ ಬಾಗಿಲು ಎರಡು ಸಾರಿ ಬಡಿಸಿಕೊಂಡಿತು!
– ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ತುಂಬಾ ಚೆನ್ನಾಗಿದೆ .
ದನ್ಯವಾದಗಳು ಸರ