ಕಾಲಯವನನ್ನು ಸಂಹರಿಸಿದ ಮುಚುಕುಂದ  

Share Button

 

ಪರಾಕ್ರಮವನ್ನು ಎಲ್ಲರೂ ಬಯಸುತ್ತಾರೆ. ವೈರಿಗಳು ಹೆದರುತ್ತಾರೆ. ಆದರೆ ಶೂರತ್ವ, ಸಾಮರ್ಥ್ಯ ಇದ್ದರೂ ಸತ್ಯ, ನ್ಯಾಯ, ಧರ್ಮ ಇಲ್ಲದಿದ್ದಲ್ಲಿ ಒಂದು ದಿನ ಅಂತಹವನ ಪತನವಾಗುವುದಂತೂ ಖಂಡಿತ. ಇದಕ್ಕೆ ದೃಷ್ಟಾಂತವಾಗಿ ಪುರಾಣದಿಂದ ಹೇರಳವಾಗಿ ಉದಾಹರಣೆಗಳು ನಮಗೆ ದೊರೆಯುತ್ತವೆ. ಈ ನಿಟ್ಟಿನಲ್ಲಿ ರಾಕ್ಷಸ ಗುಣದವರು ತಮ್ಮ ಪರಾಕ್ರಮ ಹೆಚ್ಚಿಸಿಕೊಳ್ಳಲು ಬ್ರಹ್ಮ, ವಿಷ್ಣು, ಮಹೇಶ್ವರ ಹೀಗೆ ತ್ರಿಮೂರ್ತಿಗಳಲ್ಲಿ ಯಾರಾದರೊಬ್ಬರನ್ನು ಕುರಿತಾಗಿ ತಪಸ್ಸು ಮಾಡಿ ಒಲಿಸಿಕೊಂಡು ವರವನ್ನು ಪಡೆದು ತಮ್ಮನ್ನು ಇನ್ನು ಮೀರಿಸುವವರೇ ಇಲ್ಲ ಎಂದು ಹೆಮ್ಮೆಯಿಂದ ಬೀಗುತ್ತಾರೆ.

ಭಗವಂತ ಹೇಗೆಯೇ ವರಕೊಟ್ಟರೂ ಅದನ್ನು ದುರ್ಬಳಕೆ ಮಾಡಿದರೆ, ಲೋಕಕಂಟಕರಾದರೆ ಅಂತಹವರ ಅವಸಾನ ಮಾರ್ಗವನ್ನು ಪರಮಾತ್ಮ ಕಂಡುಕೊಂಡಿರುತ್ತಾನೆ. ಅಂತಹ ರಾಕ್ಷಸರನ್ನು ಅಥವಾ ಅಸುರೀ ಪ್ರವೃತ್ತಿಯನ್ನು ಮೆಟ್ಟಿ ಹಾಕಲು ಪರಮಾತ್ಮ ಸತ್ಪುರುಷರನ್ನು ಹೇತುವನ್ನಾಗಿಸಿ ಲೋಕಕಂಟಕರನ್ನು ನಿರ್ನಾಮ ಮಾಡುತ್ತಾನೆ. ಇಂತಹ ದುಷ್ಟಾಂತದಲ್ಲಿ ಮುಚುಕುಂದ ಮಹರ್ಷಿ ನಮ್ಮೆದುರು ನಿಲ್ಲುತ್ತಾರೆ.

ಸೂರ್ಯವಂಶದ ಮಾಂಧಾತನ ಮಗ ಮುಚುಕುಂದ. ಪುರುಕುತ್ಸ ಮತ್ತು ಅಂಬರೀಷ ಇವರಿಬ್ಬರೂ ಈತನ ಸಹೋದರರು, ಕಾಲಯವನೆಂಬ ರಾಕ್ಷಸನನ್ನು ಸಂಹಾರ ಮಾಡಲು ದೇವೇಂದ್ರನು ಮುಚುಕುಂದನ ಸಹಾಯ ಪಡೆದನು. ಈ ಕಾಲಯವನೆಂದರೆ ಯಾರು? ಮುಚುಕುಂದನು ಕಾಲಯವನನ್ನು ಎಲ್ಲಿ ?ಹೇಗೆ? ಸಂಹಾರ ಮಾಡುತ್ತಾನೆ ಎಂಬುದನ್ನು ತಿಳಿಯಬೇಕಲ್ಲವೇ ? ಗರ್ಗಮುನಿಯು ಶಿವನ ಅನುಗ್ರಹದಿಂದ ಒಬ್ಬ ಅಪ್ಸರೆಯಲ್ಲಿ ಕಾಲಯವನನ್ನು ಪಡೆದನು. ಈ ಕಾಲಯವನ ಹುಟ್ಟಿಗೂ ವಿಶೇಷ ಸನ್ನಿವೇಶವಿದೆ. ಒಮ್ಮೆ ಯಾದವರು ತಮ್ಮ ಪುರೋಹಿತನಾದ ಗರ್ಗನನ್ನು ಪರಿಹಾಸ್ಯ ಮಾಡಿದುದರಿಂದ ಆತನು ಕೋಪಾವಿಷ್ಟನಾಗಿ ಯಾದವರನ್ನು ಹಿಂಸಿಸುವ ಮಗನನ್ನು ಪಡೆಯಬೇಕೆಂದು ನಿರ್ಧರಿಸಿದನು. ಸರಿ, ಅದಕ್ಕಾಗಿ ಶಿವನನ್ನು ತಪಸ್ಸು ಮಾಡಿ ಗರ್ಗನು ಅಪ್ಸರೆಯಕಾಲಯವನನ್ನು  ಮಗನಾಗಿ ಪಡೆದನು. ಇವನು ಅತ್ಯಂತ ದುಷ್ಟ ಪರಾಕ್ರಮಿಯಾಗಿದ್ದನು. ಶಿವನ ಅನುಗ್ರಹದಿಂದ ವರ ಪಡೆದಿದ್ದರಿಂದ ಈತನನ್ನು ಶ್ರೀಕೃಷ್ಣನೂ ಇದಿರಿಸಲಾರದೆ  ಹೋದನು.

ಕಾಲಯವನನ್ನು ಮುಗಿಸುವುದಕ್ಕಾಗಿ ದೇವತೆಗಳು ದೇವೇಂದ್ರನಿಗೆ ಮೊರೆಯಿಟ್ಟರು. ಕಾಲಯವನ  ಸಂಹಾರಕ್ಕಾಗಿ ದೇವೇಂದ್ರ ಒಂದು ಉಪಾಯವನ್ನು ಹೇಳಿಕೊಟ್ಟನು.

ಒಮ್ಮೆ ಕಾಲಯವನು  ಶ್ರೀಕೃಷ್ಣನನ್ನು ಬೆನ್ನಟ್ಟಿ ಬಂದಾಗ ಮುಚುಕುಂದ ಮಹರ್ಷಿ ಅವರು ಮಾಡುತ್ತಿದ್ದ ಗವಿಯ ಮಾರ್ಗವಾಗಿ ಶ್ರೀಕೃಷ್ಣನು ಓಡಿ ಹೋದನು. ಮುಚುಕುಂದ ಮಹರ್ಷಿಯನ್ನು ಶ್ರೀಕೃಷ್ಣನೆಂದೇ ಭಾವಿಸಿದ ಕಾಲಯವನು ತನ್ನ ಕಾಲಿನಿಂದ ತುಳಿದನು. ಎಚ್ಚೆತ್ತ ಮುಚುಕುಂದ ಮಹರ್ಷಿಯ ನೇತಾಗ್ನಿಗೆ ಕಾಲಯವನು  ಸುಟ್ಟು ಬೂದಿಯಾಗಿ ಹೋದನು, ತದನಂತರ ಶ್ರೀಕೃಷ್ಣನು ಮುಚುಕುಂದನಿಗೆ ಕಾಣಿಸಿಕೊಂಡನು. ಭಗವತ್ ಸ್ವರೂಪನಾದ ಕೃಷ್ಣನನ್ನು ಕಂಡ ಮುಚುಕುಂದನು ಅತ್ಯಂತ ಸಂತೋಷಯುಕ್ತನಾಗಿ  ಸಮಸ್ಕರಿಸಿದನು. ಮುಚುಕುಂದನಿಗೆ ಶ್ರೀಕೃಷ್ಣನು ಕಾಣಿಸಿಕೊಂಡ ಈ ಸ್ಥಳವೇ ಕಾಸರಗೋಡು ಜಿಲ್ಲೆಯಲ್ಲಿರುವ ಮುಜುಂಗಾವು ಕ್ಷೇತ್ರ . ಇಲ್ಲಿ ಪಾರ್ಥಸಾರಥಿ ಶ್ರೀಕೃಷ್ಣ ದೇವಸ್ಥಾನವಿದ್ದು ಕುಂಬಳೆ ಸೀಮೆಯ ನಾಲ್ಕು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ.ಮುಚುಕುಂದನಿಗೆ ಕೃಷ್ಣನ ದರ್ಶನವಾದ ಈ ಸ್ಥಳಕ್ಕೆ ಮುಜುಂಗಾವು ಎಂದು ಹೆಸರಾಯಿತೆಂದು ಅಲ್ಲಿಯ ಸ್ಥಳ ಪುರಾಣ ಹೇಳುತ್ತದೆ.

ಇಲ್ಲಿ ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯ, ಶ್ರೀಭಾರತೀ ವಿದ್ಯಾಪೀಠ, ಶ್ರೀಭಾರತೀ ನೇತ್ರ ಚಿಕಿತ್ಸಾಲಯಗಳು ಹೊಸನಗರದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ನಿರ್ದೆಶಾನುಸಾರ ಕಾರ್ಯನಿರ್ವಹಿಸುತ್ತಿವೆ. ದೇವಾಲಯ, ಚಿಕಿತ್ಸಾಲಯ, ವಿದ್ಯಾಲಯಗಳೆಂಬ ಮೂರು ಸಂಸ್ಥೆಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿವೆ.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

4 Responses

  1. Anonymous says:

    ಧನ್ಯವಾದಗಳು ಪ್ರಕಟಿಸಿದ ಹೇಮಮಾಲಾ ಹಾಗೂ ಓದುಗ ವೃಂದಕ್ಕೆ.

  2. ನಯನ ಬಜಕೂಡ್ಲು says:

    ನೈಸ್ ಮೇಡಂ, ಮುಜುಂಗಾವು ಕ್ಷೇತ್ರಕ್ಕೆ ಹೀಗೊಂದು ಪೌರಾಣಿಕ ಹಿನ್ನಲೆ ಇದೆ ಅಂತ ಇವತ್ತು ನಿಮ್ಮ ಲೇಖನ ಓದಿ ಗೊತ್ತಾಯಿತು.

  3. ಶಂಕರಿ ಶರ್ಮ, ಪುತ್ತೂರು says:

    ಪ್ರಸಿದ್ಧ ಮುಜುಂಗಾವು ದೇವಸ್ಥಾನದ ಪೌರಾಣಿಕ ಹಿನ್ನಲೆಯ ಸೊಗಸಾದ ನೌರೂಪಣೆ ವಿಜಯಕ್ಕ

  4. Asha nooji says:

    ಅಪ್ಪು ಸರಿಯಾದ ಹಿನ್ನೆಲೆ ಹೇಳಿದಿ ವಿಜಯತ್ತೆ
    ಓದಿ ತಿಳಿದುಕೊಂಡೆ .

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: