ಸಾಗುವ ದಾರಿ

ಈ ಮನಸ್ಸು ತುಂಬಾ ಚುರುಕು
ಹುಡುಕಿ ತೆಗೆಯುವುದು ಹುಳುಕು
ನಡೆಯದು ಇಲ್ಲಿ ನಿನ್ನ ತಳಕು ಬಳಕು
ಮಾಡದಿರು ನೀ ಯಾರಿಗೂ ಕೆಡುಕು
ಮಾಡಬೇಕು ಆದಷ್ಟು ಒಳಿತು
ದ್ವೇಷ ಅಸೂಯೆಯ ಮರೆತು
ಬೆರೆಯಬೇಕು ಎಲ್ಲರೊಡನೆ ಕಲೆತು
ನಲಿಯಬೇಕು ಒಂದಾಗಿ ಬೆರೆತು
ನಂಬಿ ನಡೆದಾಗ ಬದುಕುಂಟು
ಪರಿಶ್ರಮ ಹೋರಾಟದಲ್ಲಿ ಗೆಲುವುಂಟು
ಅಂಟಿಕೊಂಡಷ್ಟು ಹೆಚ್ಚುವುದು ನಮ್ಮ ನಂಟು
ಕೂಡಿ ಕಳೆದಷ್ಟೂ ತುಂಬುವುದು ಗಂಟು
ಬರುವುದಿಲ್ಲ ಇಲ್ಲಿ ಯಾರೂ ಕೊನೆತನಕ
ಒಬ್ಬರಿಗೊಬ್ಬರು ಚೆನ್ನಾಗಿರಬೇಕು ಇರುವತನಕ
ಯಾರೂ ಹೊತ್ತುಯುವುದಿಲ್ಲ ಧನ_ಕನಕ
ಮಾಡಿಕೊಳ್ಳಬಾರದು ಇಲ್ಲಿ ಜೀವನವ ನರಕ
ಹೂವಂತೆ ಮನವು ಅರಳಬೇಕು
ಎಲ್ಲರೊಡನೆ ನಗು ನಗುತ ಬೆರೆಯಬೇಕು
ಇರುವುದನ್ನು ಹಂಚಿ ನೆಮ್ಮದಿಯಲಿ ತಿನ್ನಬೇಕು
ಖುಷಿ ಖುಷಿಯಲಿ ಬದುಕ ಮುನ್ನಡೆಸಬೇಕು
ಮನೆ ಮನದಿ ಮುಸುಕಿದ ಕತ್ತಲ ಕಳೆಯಬೇಕು
ಸಾಗುವ ದಾರಿಯಲ್ಲಿ ಬೆಳಕನ್ನು ಹಚ್ಚಿ ಬೆಳಗಬೇಕು
ಜೊತೆಗೆ ಬಂದವರ ಸಂತಸವ ಹೆಚ್ಚಿಸಬೇಕು
ಒಳ್ಳೆಯತನವನ್ನು ಉಳಿಸಿ ಬೆಳೆಸಬೇಕು
-ನಾಗರಾಜ ಜಿ. ಎನ್. ಬಾಡ, ಕುಮಟ
Nice
ಕವನ ಚೆನ್ನಾಗಿದೆ ಸಾರ್
ಉತ್ತಮ ಆಶಯವನ್ನು ಹೊತ್ತ, ಅಂತ್ಯಪ್ರಾಸ ಹೊಂದಿದ ಕವನ ಸೊಗಸಾಗಿ ಮೂಡಿಬಂದಿದೆ.
ಆತ್ಮಾವಲೋಕನ ಮಾಡಿಕೊಳ್ಳುತ್ತಾ ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವ ಚಂದದ ಸಾಲುಗಳು.